ಎಐ  ಮತ್ತು ಕಲೆಯ ಮೂಲಕ ಹವಾಮಾನ ಬದಲಾವಣೆಯ ಬಗ್ಗೆ ಆಲೋಚನೆ

ಪಾಸ್ ಪಡೆಯರಿ

ಫ್ಯೂಚರ್ ಫೆಂಟಾಸ್ಟಿಕ್ ಬಗ್ಗೆ

ಫ್ಯೂಚರ್ ಫೆಂಟಾಸ್ಟಿಕ್ ಒಂದು ಅನನ್ಯ ಉತ್ಸವ. ಇಂಥಹ ಎಐ ಮತ್ತು ಕಲಾ ಉತ್ಸವ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ನಡೆಯುತ್ತಿದೆ.  ಈ ಉತ್ಸವವು, ನಾವು ಒಟ್ಟಿಗೆ ಅನುಭವಿಸುತ್ತಿರುವ ಹವಾಮಾನ ವೈಪರೀತ್ಯವನ್ನು ಹೇಗೆ ಕ್ರಿಯಾತ್ಮಕ, ಸಹಕಾರಿ ಕಾರ್ಯಕ್ರಮಗಳ ಮೂಲಕ ಯಶಸ್ವಿಯಾಗಿ ಎದುರಿಸಬಹುದು ಎಂಬುದನ್ನು ಪ್ರದರ್ಶಿಸಲಿದೆ. ಈ ಉತ್ಸವದ ಪರಿಕಲ್ಪನೆಯನ್ನು ಬಿ ಫೆಂಟಾಸ್ಟಿಕ್ (Be Fantastic) , ಫ್ಯೂಚರ್ ಎವ್ರಿಥಿಂಗ್ (Future Everything) ಯಾ ಸಹಕಾರದೊಂದಿಗೆ ಮಾಡಿದೆ. ಈ ಉತ್ಸವದ ಉದಾರಿ ಹಾಗು ಪ್ರಮುಖ ಬೆಂಬಲಿಗರು ದಿ ಬ್ರಿಟಿಷ್ ಕೌನ್ಸಿಲ್’ಸ್ ಇಂಡಿಯಾ/ಯುಕೆ ತೋಜುಥೆರ್ ಸೀಸನ್ ಆಫ್ ಕಲ್ಚರ್  (The British Council’s India/UK Together Season of Culture,) ಮತ್ತು ರೋಹಿಣಿ & ನಂದನ್ ನಿಲೇಕಣಿ ಫಿಲಂಥರೊಪಿಸ್ (Rohini & Nandan Nilekani Philanthropies.) 

ಫ್ಯೂಚರ್ ಫೆಂಟಾಸ್ಟಿಕ್ ಬೆಂಗಳೂರಿನಾದ್ಯಂತ ಎಐ  ಮೂಲಕ ಆಮೇಲೇರಿಸುವಂತಹ ಕಲಾಕೃತಿಗಳನ್ನು ಹಾಗು ಪ್ರದರ್ಶನಗಳನ್ನು ನಿಮ್ಮ ಮುಂದೆ ತರಲು ಆಶಿಸುತ್ತದೆ. ತಂತ್ರಜ್ಞ, ಕಲೆ ಹಾಗು ಸುಸ್ಥಿರ ಬೆಳವಣಿಗೆಯ ತಜ್ಞರು ನಡೆಸಲಿರುವ ಚರ್ಚೆ ಹಾಗು ಕಾರ್ಯಾಗಾರಗಳಲ್ಲಿ ಭಾಗವಹಿಸಲು ನಿಮ್ಮನ್ನು ಆಹ್ವಾನಿಸುತ್ತೇವೆ. ಈ ಒಡನಾಟದ ಮೂಲಕ, ಈ ಚರ್ಚೆಗಳ ಬೇರೆ ಬೇರೆ ಆಯಾಮಗಳು ಹಾಗು ದೃಷ್ಟಿಕೋನಗಳು ರಾರಾಜಿಸಬೇಕು ಎಂಬುದು ನಮ್ಮ ಆಶಯ.

ಜಾಗತಿಕ ನಾಗರಿಕರಾಗಿ ನಾವು ಒಂದು ಕ್ರಾಂತಿಕಾರಿ, ಮುಕ್ತ ಮತ್ತು ಆಶಾವಾದಿ ಭವಿಷ್ಯವನ್ನು ಒಟ್ಟಿಗೆ ಕಟ್ಟಬಹುದು ಎಂಬ ನಂಬಿಕೆಯೊಂದಿಗೆ ಇವೆಲವನ್ನು ಮಾಡುತ್ತಿದ್ದೇವೆ. 

ಫ್ಯೂಚರ್ ಫೆಂಟಾಸ್ಟಿಕ್, ಹವಾಮಾನ ಬದಲಾವಣೆಯ ತುರ್ತು ಪರಿಸ್ಥಿಯ ಬಗ್ಗೆ ತಜ್ಞರ, ಕಲಾವಿದರ, ತಂತ್ರಜ್ಞರ ಮತ್ತು ಪ್ರೇಕ್ಷಕರ ಒಡನಾಟವನ್ನು ಸಾಧ್ಯಗೊಳಿಸಳು ಆಶಿಸುತ್ತದೆ. ಈ ಎಐ ಸಂಚಲಿತ ಕಲಾಕೃತಿಗಳು ಹಾಗು ಪ್ರದರ್ಶನಗಳು ಪ್ರೇಕ್ಷಕರನ್ನು ತಲ್ಲೀನಗೊಳಿಸಿ, ಒಂದು ಪರಿಸರ ಸ್ನೇಹಿ, ಸುಂದರ ಹವಾಮಾನವಿರುವ ಭವಿಷ್ಯ ಹೇಗೆ ಕಾಣಬೋಹುದು ಎಂಬ ಕಲ್ಪನೆಯನ್ನು ಸಾಕಾರಗೊಳಿಸುತ್ತದೆ.  ಹಾಗೆಯೇ, ಈಗಿನ ನಿಷ್ಕ್ರಿಯತೆಯ ಪರಿಣಾಮ ಏನಾಗಬಹುದೆಂದು ತೋರಿಸುತ್ತದೆ.

ಕಾರ್ಯಕ್ರಮದ ಮುಖ್ಯಾಂಶಗಳು

ಪ್ರದರ್ಶನಗಳು

ತಲ್ಲೀನಗೊಳಿಸುವ, ಸಂವಾದಾತ್ಮಕ ಮತ್ತು ವಿಚಾರಾತ್ಮಕ ಎಐ ಮತ್ತು ಕಲಾಪ್ರದರ್ಶನಗಳು

ಡೈಲಾಗ್ (ಸಂವಾದ)

ಕಲೆ, ತಂತ್ರಜ್ಞ ಮತ್ತು ಹವಾಮಾನದ ತಜ್ಞರು ಮತ್ತು ಉತ್ಸಾಹ ಭರಿತ ಪ್ರೇಕ್ಷಕರ ನಡುವಿನ ಸಂಭಾಷಣೆ

ಕೋ ಲಾಬ್

ಸಹಯೋಗ ಮತ್ತು ಪ್ರಾಯೋಗಿಕ ಕಲಿಕೆಯನ್ನು ಪ್ರೇರೇಪಿಸುವ ತಂತ್ರಜ್ಞ ಕಲಾ ಕಾರ್ಯಾಗಾರಗಳು

ಪಾಸ್ ಪಡೆಯರಿ

ಬಿ ಫೆಂಟಾಸ್ಟಿಕ್ ಬಗ್ಗೆ

ಬಿ ಫೆಂಟಾಸ್ಟಿಕ್ ಒಂದು ತಂತ್ರಜ್ಞಕಲಾ (ಟೆಕ್ ಆರ್ಟ್) ವೇದಿಕೆ. ಇದು ‘ಜಾಗ’(Jaaga)  ಸಂಸ್ಥೆಯ ಭ್ರೂಣವಾಗಿ ಮೊದಲು ಹುಟ್ಟಿತು. ಶುರುವಿನಲ್ಲಿ ಬೆಂಗಳೂರಿನಲ್ಲಿ, ಸದ್ಯ ಸಿಂಗಪೂರಿನಲ್ಲಿ ಇದು ಬೇರೂರಿದೆ. ಒಂದು ಸಕಾರಾತ್ಮಕ, ಸಮರ್ಥನೀಯ ಭವಿಷ್ಯವನ್ನು ಸಮುದಾಯಗಳೊಂದಿಗೆ, ಕ್ರಿಯಾತ್ಮಕ ಹಾಗು ತಂತ್ರಜ್ನಾದ ಸಾಧ್ಯಾತೆಗಳಿಂದ ಪರಿಕಲ್ಪಿಸಿಕೊಳ್ಳಲ್ಲು ಪ್ರಯತ್ನಿಸುತ್ತಿದೆ. ಅಂತರಾಸ್ತ್ರಿಯ ತಂತ್ರಜ್ಞ – ಕಲೆಯ(ಟೆಕ್ ಆರ್ಟ್) ಸೃಷ್ಟಿಕರ್ತರನ್ನು ಒಟ್ಟುಗೂಡಿಸಿ, ತಂತ್ರಜ್ಞ ಹಾಗು ಕಲೆಯ ಸೀಮಗಳನ್ನು ಅಸೀಮಗೊಳಿಸುವುದು ಇದರ ಆಶಯ.  ಫ್ಯೂಚರ್ ಫೆಂಟಾಸ್ಟಿಕ್ ನಂತಹ ಉತ್ಸವಗಳ ಮೂಲಕ, ಅಂತಾರಾಷ್ಟ್ರೀಯ ಸಂವಾದ (ಡೈಲಾಗ್ – Dialogs ) ಹಾಗು ಸಹ ಪ್ರಯೋಗಾಲಯಗಳ (ಕೋ ಲಾಬ್ – CoLabs) ಮೂಲಕ, ಪ್ರೇಕ್ಷಕರಲ್ಲಿ ಕಲೆಯ ಬಗ್ಗೆ, ತಂತ್ರಜ್ನಾದ ಬಗ್ಗೆ ವಿನ್ಯಾಸದ ಬಗ್ಗೆ ವಿಚಾರಾತ್ಮಕ ಚಿಂತನೆಯನ್ನು ಮೂಡಿಸುವುದು ಇದರ ಗುರಿ.

ಫ್ಯೂಚರ್ ಎವ್ರಿಥಿಂಗ್ ಬಗ್ಗೆ

ಫ್ಯೂಚರ್ ಎವ್ರಿಥಿಂಗ್ ಪ್ರಶಸ್ತಿ ವಿಜೇತ ಸಂಸ್ಥೆ ಹಾಗು ಆವಿಷ್ಕಾರ ಪ್ರಯೋಗಾಲಯ. ಇದು ಮ್ಯಾಂಚೆಸ್ಟರ್ (ಯುಕ್) ಅಲ್ಲಿ ಬೇರೂರಿದೆ. ಯೂರೋಪ್ನಲ್ಲಿ ೧೯೯೫ರಿಂದ ಮೂಡುತ್ತಿರುವ ಡಿಜಿಟಲ್ ಸಂಸ್ಕೃತಿಗೆ ಇದು ಸಹಾಯ ಹಸ್ತ ನೀಡಿದೆ. ಕಲಾ ಆಯೋಗಗಳ ಮೂಲಕ, ಪ್ರದರ್ಶನಗಳ ಮೂಲಕ, ವಿಚಾರಾತ್ಮಕ ಸಂವಾದಗಳ ಮೂಲಕ, ಸಹಯೋಗಗಳ ಮೂಲಕ ಫ್ಯೂಚರ್ ಎವ್ರಿಥಿಂಗ್ ಬೇರೆ ಬೇರೆ ಕ್ಷೇತ್ರಗಳೊಂದಿಗೆ ಹಾಗು ಬೇರೆ ಬೇರೆ ಪ್ರೇಕ್ಷಕರೊಂದಿಗೆ ಕ್ರಿಯಾತ್ಮಕ ಸೀಮೆಗಳನ್ನು ಅಸ್ಸಿಮಗೊಳಿಸಲು ಮತ್ತು ನೂತನ ರೀತಿಯ ಚಿಂತನೆಗಳನ್ನು ಹೊರತರಲು ಪ್ರಯತ್ನಿಸುತ್ತಿದೆ. ಕ್ರಿಯಾ ಸಂಶೋಧನೆಯ, ಕಲಾವಿದ ನೇತೃತ್ವದ ಮತ್ತು ಮಾನವ ಕೇಂದ್ರಿತ ಪ್ರಕ್ರಿಯೆಯ ಮೂಲಕ ಈ ಸಂಸ್ಥೆಯು ಜಗತಾದ್ಯಂತ ವಿವಿಧ ಯೋಜೆನೆಗಳನ್ನು ಮತ್ತು ಕಾರ್ಯತಂತ್ರ ಪಾಲುದಾರಿಕೆಯನ್ನು ನನಸಾಗಿಸಿದೆ. ಈ ಸಂಸ್ಥೆಯ ಇತ್ತೀಚಿನ ಯೋಜನೆಗಳೆಂದರೆ ಫ್ಯೂಚರ್ ಫೆಂಟಾಸ್ಟಿಕ್, ಪ್ಲಾಸ್ಮಾತ : ಬಾಡೀಸ್, ಡ್ರೀಮ್ಸ್ ಅಂಡ್ ಡೇಟಾ (Plásmata: Bodies, Dreams and Data) ಮತ್ತು ಯು ಅಂಡ್ ಐ ಥ್ರೂ ದಿ ಅಲ್ಗೊರಿಥಿಮಿಕ್ ಲೆನ್ಸ್  (You and AI: Through the Algorithmic Lens) ಇತ್ಯಾದಿ.